ಭಾವ ಬಿಂದು

Sunday, June 10, 2007

ಎಲ್ಲೋ ಕಳೆದುಹೋಯಿತೆಂದ ಭಾವ ಮನಸ್ಸಿನೊಳಗೆ ಬೆಚ್ಚಗೆ ಹುದುಗಿರುತ್ತದೆ. ಕಳೆದು ಹೋದ ಸಂಬಂದಗಳು ಮತ್ತೆ ಬಂದಗಳಾಗುತ್ತವೆ. ಆಡಲಾರದ ಮಾತುಗಳು ಒಳಗೇ ಹುದುಗಿಬಿಡುತ್ತದೆ. ದುಡುಕಿ ಆಡಿದ ಮಾತುಗಳು ಮನವನ್ನು ಚುಚ್ಚುತ್ತಿರುತ್ತವೆ. ಯಾವುದೋ ಇಗೋ ಇಡಿಯ ಸಂಸಾರದ ಸಾಮರಸ್ಯವನ್ನೆ ಕದಡುತ್ತವೆ.
ಈ ಕೆಲವು ದಿನಗಳು ಅವವೇ ಯೋಚನೆಗಳು ಪುನ: ಪುನ: ಮನಸ್ಸಿನಲ್ಲಿ ಮೂಡುತ್ತಿವೆ. ಸುತ್ತ ನೋಡುತ್ತಿದ್ದರೆ ಸುಖವಾಗಿರುವ ವ್ಯಕ್ತಿಗಳನ್ನು ಭೂತಕನ್ನಡಿಯಿಂದ ಹುಡುಕಬೇಕಾಗಿದೆ. ಒಂದೊಂದು ಸಂಸಾರ್ದಲ್ಲಿ ಒಂದೊಂದು ಸಮಸ್ಯೆ.
ಕೆಲವು ವಿಥಿಯು ತಂದೊಡ್ಡಿದ್ದು. ಕೆಲವು ತಾವಾಗೇ ತಂದುಕೊಂಡಿದ್ದು. ಕೆಲವು ಒಬ್ಬರ ತಪ್ಪುಗಳಿಂದ ಇಡಿಯ ಸಂಸಾರ ನೋವುಗಳನ್ನು ಅನುಭವಿಸುವುದು. ಇನ್ನು ಕೆಲವರು ಸಮಸ್ಯೆಯಲ್ಲದ ಸಮಸ್ಯೆಗಳನ್ನು ಹುಟ್ಟು ಹಾಕಿಕೊಳ್ಳುವುದು.
ಆದರೂ ಯಾವಾಗಲೂ ಅನ್ನಿಸುತ್ತೆ. ಬೇರೆಯವರ ಸಮಸ್ಯೆಗಳ್ನ್ನು ತಲೆಗೆ ಹಾಕಿಕೊಳ್ಳದೆ ಇರಲು ಸಾಥ್ಯವೇ ಇಲ್ಲ .
ಆದ್ರೂ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಎಶ್ಟು ಸುಲಭ ಸೂತ್ರಗಳಿವೆ.
ಒಂದು ನಲ್ಮೆಯ ಮಾತು
ಒಂದು ಮುಗುಳ್ನಗು,
ಮನವನರಳಿಸುವ
ಒಂದು ಬೆಚ್ಚನೆ ಸ್ಪರ್ಶ
ಕಣ್ಣೀರೊರೆಸುವ
ಒಂದು ಸಾಂತ್ವನದ ನುದಿ
ನೂರು ಕ್ಸಮೆಗಳ ನೀವ
ಒಂದು ಪಶ್ಚಾತಾಪ.
ಹೊಸಭಾವ ಚಿಗುರಿಸುವ
ಒಂದು ಭಾವನಿವೇದನೆ,
ಬಿದ್ದವರನೆತ್ತಲು
ಒಂದು ಸಹಾಯಹಸ್ತ,
ತೆರೆದ ಮನ ತೆರೆದ ಮಾತು
ಮತ್ತೆಲ್ಲಿದೆ ವಿಷಾದಕೆ ತಾವು?