ಭಾವ ಬಿಂದು

Tuesday, August 15, 2006

ಪ್ರಶ್ನೆ

ಮನದೊಳಗೆ ಮೂಡಿ ನವಿರಾದ ಕಾವ್ಯ
ಕ್ಷಣ ಕಳೆವುದರೊಳಗೆ ಗೋಜಲು
ಬರಿ ಶಬ್ದಗಳ ತಾಕಲಾಟ, ಅರ್ಥವಾಗದೆ ಜಟಿಲ.
ಏಕೆ ಹೀಗೆ? ಬರಿಯ ಪ್ರಶ್ನೆ!

ಅಂದೆಂದೋ ತಂಗಾಳಿಗೆದುರಾಗಿ ಕುಳಿತಂದು,
ನೂರು ಭಾವಗಳ ಮೂಡಿಸಿದ ಚಂದ್ರ !
ಇಂದು ಭಾವಚಂದ್ರನ ಮೇಲೆ ಮುಸುಗೆಳೆದ ಮೋಡ.
ಏಕೆ ಹೀಗೆ? ನಿರ್ಭಾವ- ? ಮನ ಪ್ರಶ್ನಿಸುತ್ತಿದೆ, ನಿರುತ್ತರ.

ಮುಂಜಾವಿನ ಹಕ್ಕಿಗಳ ಚಿಲಿಪಿಲಿಗಳಂತೆ
ಚಟಪಟನೆ ಬಂದ ನೂರು ಭಾವ!
ಹೋಯಿತೆಲ್ಲಿಗೆ? ಪ್ರಶ್ನಿಸುತ್ತಿದೆ ಮನ.
ಬರಿ ಗಲಿಬಿಲಿ! ನಿರುತ್ತರ.

5 Comments:

 • At 10:41 AM, Blogger Deep said…

  congrats madam :-)

   
 • At 11:22 PM, Blogger bhadra said…

  ನಿರುತ್ತರ ಓದಿ ಪ್ರತಿಕ್ರಿಯಿಸಲು ನಿರುತ್ತರನಾಗಿರುವೆ. ವ್ಯಕ್ತಪಡಿಸಲಾಗದ ಭಾವನೆಗಳ ಸುಂದರ ನಿರೂಪಣೆ.

  ಕಾವ್ಯ ಕೃಷಿ ಹೀಗೆಯೇ ಮುಂದುವರೆಯಲಿ.

   
 • At 12:04 AM, Blogger Saraswathi Nataraj said…

  ಭಾವಬಿಂದುವಿಗೆ ಸುಸ್ವಾಗತ. ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

   
 • At 1:30 AM, Blogger ಮನಸ್ವಿನಿ said…

  ಚೆನ್ನಾಗಿದೆ ಕವನ

   
 • At 7:07 AM, Blogger Saraswathi Nataraj said…

  ಧನ್ಯವಾದಗಳು ಮನಸ್ವಿನಿಯವರೆ....

   

Post a Comment

<< Home