ಭಾವ ಬಿಂದು

Tuesday, August 15, 2006

ಮನಸು

ಎಷ್ಟು ಆಯಾಮಗಳೋ
ಈ ಹುಚ್ಚು ಮನಸಿಗೆ.
ಒಮ್ಮೆ ನಗು, ಒಮ್ಮೆ ಅಳು,
ಕಡು ಬೇಸರವೊಮ್ಮೆ,
ಹರ್ಷದ್ಹೊಳೆಯ ಚಿಲುಮೆ.
ಅಚ್ಚರಿಯ ವೈಪರೀತ್ಯ,
ಕ್ಷಣ ಚಿತ್ತ ಕ್ಷಣ ಪಿತ್ಥ,
ಗೌಜು ಗದ್ದಲದ ನಡುವೆ
ಕಾಡೋ ಒಂಟಿಬಡುಕತನ.
ಆದರದು ಶಾಶ್ವತವಲ್ಲ,
ಕ್ಷಣ ಕಳೆದರೆ ಮತ್ತೆ,
ಸಂತಸ ಚಿಮ್ಮುತ್ತೆ.
ಏನೀ ಮನಸಿನ ಪರಿ?
ಕೈಗೆಟುಕದ ಕಳ್ಳನೇ ಸರಿ.
ಲೋಕಗಳ ಜೈಸಿದ್ದ ಧೀರರೆಷ್ಟೋ ಮಂದಿ,
ಮನ ಮರ್ಕಟದೆದುರು ಚಿಂದಿ.
ಏನೀ ಮನಸಿನ ಲೀಲೆ?
ಯೋಚನೆಗಳ ಸರಮಾಲೆ.
ಬಿಡುವಿರದೆ ದಡಕೆ ಬಡಿವ
ಕಡಲಲೆಗಳಂತೆ.

(ತರಂಗ ವಾರಪತ್ರಿಕೆಯಲ್ಲಿ ಪ್ರಕಟಿತ)

5 Comments:

 • At 11:24 PM, Blogger bhadra said…

  ಮರ್ಕಟ ಮನಸ್ಸಿನ ಹಲವು ಆಯಾಮಗಳನ್ನು ಕನ್ನಡಿಯಲ್ಲಿ ತೋರಿಸಿದ್ದೀರಿ. ಮತ್ತೊಂದು ಸುಂದರ ಕವನ. ಅಂದ ಹಾಗೆ ನಿಮ್ಮ ಬಗ್ಗೆ ನನಗೇನೂ ತಿಳಿಯಲಿಲ್ಲವೇ?

   
 • At 9:42 PM, Blogger Deep said…

  ಲೋಕಗಳ ಜೈಸಿದ್ದ ಧೀರರೆಷ್ಟೋ ಮಂದಿ,
  ಮನ ಮರ್ಕಟದೆದುರು ಚಿಂದಿ.

  adestu nija,
  Ellello geddu bandavaru
  Illi soluvaru :-)

   
 • At 1:31 AM, Blogger ಮನಸ್ವಿನಿ said…

  ಚೆನ್ನಾಗಿದೆ ಕವನ...ಹೀಗೆ ಬರೆಯುತ್ತಿರಿ.

   
 • At 3:56 AM, Blogger Anveshi said…

  ಕವನಗಳ
  ಭಾವ ಬಿಂದು
  ನೆಟ್ಟಿನಲ್ಲಿ
  ಭಾವ ಸಮುದ್ರವಾಗಲಿ...
  :)

   
 • At 7:11 AM, Blogger Saraswathi Nataraj said…

  ಧನ್ಯವಾದಗಳು ಮನಸ್ವಿನಿಯವರೆ ಮತ್ತು ಅಸತ್ಯಾನ್ವೇಷಿಗಳೆ....

   

Post a Comment

<< Home