ಭಾವ ಬಿಂದು

Wednesday, August 23, 2006

ಜ್ಯಾಮಿತಿ

(ತರಂಗ ೨೮ನೇ ನವೆಂಬರ್ ೨೦೦೨ರ ಸಂಚಿಕೆಯಲ್ಲಿ ಪ್ರಕಟಿತ.)
ಬದುಕು,
ಒಮ್ಮೊಮ್ಮೆ ವೃತ್ತ,
ಬಿಂದು, ತ್ರಿಜ್ಯ, ತ್ರಿಕೋನಗಳ ಜ್ಯಾಮಿತಿ.
ವೃತ್ತದೊಳಗೊಂದು ವೃತ್ತದೊಳಗೊಂದು
ವೃತ್ತದೊಳಗೊಂದು - ಹೀಗೇ,
ಒಂದಕ್ಕೊಂದು ಬೆಸೆದೂ,
ಒಂದರಿಂದೊಂದು ಸ್ವತಂತ್ರ.
ಅಂಟಿಯೂ ಅಂಟದಿಹ
ಅಸ್ತಿತ್ವ ಪರಿಧಿ !
ಚಿತ್ರ ವಿಚಿತ್ರ ಗೆರೆಗಳ ಸಮೂಹ.
ಹೀಗೊಂದು ಗೆರೆ,
ಹಾಗೊಂದು ಗೆರೆ
ಎರಡೂ ಬೆರೆತು ಕೋನ !
ಅದರದೊಂದು ಸ್ವರೂಪ.
ಕೆಲವೊಂದು ರೇಖೆಗಳು
ಸಮಾನಾಂತರ!
ಯಾವೊಂದು ನೆಲೆಯಲೂ ಅ-ದೂರವೆ !

2 Comments:

  • At 3:33 AM, Blogger Deep said…

    ವೃತ್ತದೊಳಗೊಂದು ವೃತ್ತದೊಳಗೊಂದು
    ವೃತ್ತದೊಳಗೊಂದು - ಹೀಗೇ,

    Nenapige banditondu Suli.. ello alakke eleda hage..

    ಒಂದಕ್ಕೊಂದು ಬೆಸೆದೂ,
    ಒಂದರಿಂದೊಂದು ಸ್ವತಂತ್ರ.
    ಅಂಟಿಯೂ ಅಂಟದಿಹ
    ಅಸ್ತಿತ್ವ ಪರಿಧಿ !

    Wah..
    Namma Software design prinicples nalli heltare..

    "A design is said to be good when it is loosely coupled and very cohesive"

    Haage nodidare.. Ella priniciple to talahadi onde alve?
    Ella kadegu

     
  • At 9:55 PM, Blogger Saraswathi Nataraj said…

    ಧನ್ಯವಾದಗಳು ದೀಪಕ್,ನೀವು ಹೇಳಿದ್ದು ನಿಜ. ವಿಜ್ಞಾನವೂ ವೇದಾಂತವೂ ಕೊನೆಗೆ ಒಂದೇ. ವೇದಾಂತ ಮೊದಲಿಗೆ ಹೇಳುವುದನ್ನು. ವಿಜ್ಞಾನ ಒಂದೊಂದೇ ಹೆಜ್ಜೆಯಲ್ಲಿ ನಿರೂಪಿಸುತ್ತದೆ.

     

Post a Comment

<< Home