ಭಾವ ಬಿಂದು

Monday, January 22, 2007

ನಮಸ್ಕಾರಗಳು,
ಎಷ್ಟೊಂದು ದಿನಗಳಾದ ಮೇಲೆ ಬ್ಲಾಗ್ ನೋಡುತ್ತಿದ್ದೇನೆ. ಪ್ರತಿಸಲ ಮನ್ ಹೇಳಿಕೊಡ್ತಾನೇ ಇರ್‍ತಾಳೆ. ನಾನ್ ಮರೀತಾನೇ ಇರ್‍ತೀನಿ. ಆಗೆಲ್ಲಾ ನಾನು ಎಷ್ಟು ದಡ್ಡಿ ಅಲ್ವಾ ಅನ್ನಿಸುತ್ತೆ. ಇರಲಿ, ಈ ಪ್ರಪಂಚದಲ್ಲಿ ಎಲ್ಲರೂ ಬುದ್ಧಿವಂತರೇ ಆಗ್ಬಿಟ್ರೆ ಅವ್ರಿಗೆ ಬೆಲೇನೇ ಇರೊಲ್ಲ ಅಲ್ವಾ?
ಮನ್ ಮದುವೆ ಮಾಡಿದೆ. ನಾನ್ ಮಾಡಿದೆ ಅಂದ್ರೆ ನಿಜವಾಗೂ ತಪ್ಪಾಗುತ್ತೆ. ಎಲ್ಲರ ಸಹಕಾರದಿಂದ ಮದುವೆ ಚೆನ್ನಾಗಿ ನಡೆಯಿತು. ಅವಳು ಹೊರಟಾಗ ಎಷ್ಟೊಂದು ಖಾಲಿತನ? ಇದನ್ನ ಬರೀತಾನೇ ಕಣ್ಣು ತುಂಬಿಕೊಳ್ತಿದೆ. ಸಧ್ಯ, ಕಂಪ್ಯೂಟರ್‍ನಲ್ಲಿ ಅಕ್ಷರಗಳು ಕಲೆಸಿಹೋಗೊಲ್ಲ.
ಮತ್ತೆ ಬರೀಬೇಕು. ಅಂತ ಅನ್ನಿಸ್ತಾ ಇದೆ. ಈಸಲ ಕಲಿತಿದ್ದನ್ನ ಮರೆಯೊಲ್ಲ.( ಹಾಗಂತ ಎಷ್ಟೋ ಸಲ ಅಂದುಕೊಂಡಿದ್ದೇನೆ.
ಮೊನ್ನೆ ಆಶಾ ರೀಹ್ಯಾಬಿಲಿಟೇಶನ್ ಸೆಂಟರ್‍ ಗೆ ನಾನು ಮತ್ತೆ ಮನ್ ಹೋಗಿದ್ವು.ಅಲ್ಲಿ ಎಷ್ಟೊಂದು ಸಿ. ಪಿ ಮಕ್ಕಳನ್ನು ನೋಡಿದ್ವಿ. ಮನಸ್ಸು ಕಲಕಿಹೋಯಿತು. ತಮಗೇನಾಗಿದೆ ಎಂದೇ ಎಂದಿಗೂ ತಿಳಿಯದ ಆ ಮಕ್ಕಳನ್ನು ನೋಡಿ ಎಂಥ ನತದ್ರಷ್ಟರು ಎನಿಸಿತು.
ಅಲ್ಲಿ ಮನಸ್ಸು ತಟ್ಟಿದ ಇನ್ನೊದು ವ್ಯಕ್ತಿಯೆಂದರೆ ಸಪ್ನ. ಅವಳೊಂದು ಸುಂದರ ಕಾವ್ಯವೆನಿಸಿತು.ಮದರ್‍ ತೆರೆಸ ತಮ್ಮೊಂದು ಅಂಶವನ್ನು ಅಲ್ಲಲ್ಲಿ ಬಿಟ್ಟುಹೋಗಿದ್ದಾರೆನಿಸಿತು. ಅವಳ ಬಗ್ಗೆ ಮುಂದಿನ ಪತ್ರದಲ್ಲಿ ಬರೆಯುವೆ
ಅಲ್ಲಿಯತನಕ ಬೈ.