ಭಾವ ಬಿಂದು

Tuesday, September 16, 2008

ನೀನಿಲ್ಲದಿರುವಾಗಲೂ ನೀನಿದ್ದಿ

(ಮ಻ಲೆನಾಡ ಕಣಿವೆಯಲ್ಲೊಂದು ದಿನ)
ಇಲ್ಲಿ ಕಾಲವೂ ಸ್ಥಬ್ದ!
ನಿಶ್ಶಬ್ಧವ ಛೇದಿಸುವ
ಕರ್ಕಶತೆಯಿಲ್ಲ, ಮನವ ಮೀಟುವ
ಕಲರವ ಮಾತ್ರ.
ಮರೆತ ಗೀತವ ನೆನಪಿಸುವ,
ಪೃಕೃತಿಯ ಮರ್ಮರ.
ಮೂಗು ಕಟ್ಟಿಸುವ ಹೊಗೆ
ಧೂಳುಗಳಿಲ್ಲ,
ಕಟ್ಟುಪಾಡು ಕಿತ್ತೊಗೆಯುವ
ತಂಗಾಳಿಯ ಕಚಗುಳಿ,
ಮರೆತಿದೆ ದುಗುಡ,
ತೊರೆದಿದ್ದೇನೆ ತುಮುಲ,
ಓಗೊಟ್ಟಿದ್ದೇನೆ ಹಕ್ಕಿಯ ಕೊರಳಿಗೆ.
ಮಾರ್ದನಿಯಿಟ್ಟಿದೆ
ಮರೆತ ಕಾವ್ಯ.
ಮತ್ತೊಮ್ಮೆ ನೆನಪಾಗುತ್ತಿವೆ
ಆ ದಿನಗಳು.
ನೀನಿಲ್ಲದಿರುವಾಗಲೂ
ನೀನಿದ್ದಿ.
ನಿಶ್ಶಬ್ಧದೊಳಗಿನ ಶಬ್ದದಂತೆ,
ಮನದೊಳಗಿನ ಮಾತಿನಂತೆ.

0 Comments:

Post a Comment

<< Home