ಭಾವ ಬಿಂದು

Tuesday, September 16, 2008

ವಂದನೆಗಳು

ಆತ್ಮೀಯ ಕನ್ನಡಿಗರೆ,
ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನನ್ನ ಮೊದಲ ಕಾದಂಬರಿ "ಜ್ಯೋತಿ" ಸುಧಾ ವಾರಪತ್ರಿಕೆಯಲ್ಲಿ ಸೆಪ್ಟೆಂಬರ್ 11ರಿಂದ ಪ್ರಕಟವಾಗುತ್ತಿದೆ. ದಯವಿಟ್ಟು ಪತ್ರಿಕೆಯಲ್ಲಾಗಲೀ, ಈ ಸುಧಾದಲ್ಲಾಗಲೀ ಓದಿ, ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಧನ್ಯವಾದಗಳು.
ಸರಸ್ಡತಿ ನಟರಾಜ್.

ವಂದನೆಗಳು.

ನೀನಿಲ್ಲದಿರುವಾಗಲೂ ನೀನಿದ್ದಿ

(ಮ಻ಲೆನಾಡ ಕಣಿವೆಯಲ್ಲೊಂದು ದಿನ)
ಇಲ್ಲಿ ಕಾಲವೂ ಸ್ಥಬ್ದ!
ನಿಶ್ಶಬ್ಧವ ಛೇದಿಸುವ
ಕರ್ಕಶತೆಯಿಲ್ಲ, ಮನವ ಮೀಟುವ
ಕಲರವ ಮಾತ್ರ.
ಮರೆತ ಗೀತವ ನೆನಪಿಸುವ,
ಪೃಕೃತಿಯ ಮರ್ಮರ.
ಮೂಗು ಕಟ್ಟಿಸುವ ಹೊಗೆ
ಧೂಳುಗಳಿಲ್ಲ,
ಕಟ್ಟುಪಾಡು ಕಿತ್ತೊಗೆಯುವ
ತಂಗಾಳಿಯ ಕಚಗುಳಿ,
ಮರೆತಿದೆ ದುಗುಡ,
ತೊರೆದಿದ್ದೇನೆ ತುಮುಲ,
ಓಗೊಟ್ಟಿದ್ದೇನೆ ಹಕ್ಕಿಯ ಕೊರಳಿಗೆ.
ಮಾರ್ದನಿಯಿಟ್ಟಿದೆ
ಮರೆತ ಕಾವ್ಯ.
ಮತ್ತೊಮ್ಮೆ ನೆನಪಾಗುತ್ತಿವೆ
ಆ ದಿನಗಳು.
ನೀನಿಲ್ಲದಿರುವಾಗಲೂ
ನೀನಿದ್ದಿ.
ನಿಶ್ಶಬ್ಧದೊಳಗಿನ ಶಬ್ದದಂತೆ,
ಮನದೊಳಗಿನ ಮಾತಿನಂತೆ.